ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ 'ಪೈಲ್ವಾನ್' ಚಿತ್ರದ ಟೀಸರ್ ಮೊನ್ನೆಯಷ್ಟೇ ಸಂಕ್ರಾಂತಿ ಹಬ್ಬದ ಪ್ರಯುಕ್ತ ಬಿಡುಗಡೆ ಆಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ 'ಪೈಲ್ವಾನ್' ಟೀಸರ್ ನ ವೀಕ್ಷಿಸಿ ಪರಭಾಷೆಯ ತಾರೆಯರು ಉಘೇ ಉಘೇ ಎಂದಿದ್ದರು. 'ಪೈಲ್ವಾನ್' ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಾಗಿರುವಾಗಲೇ, ಚಿತ್ರತಂಡದಿಂದ ಒಂದು ಸಿಹಿ ಸುದ್ದಿ ಹೊರಬಿದ್ದಿದೆ. ಅದೇನಪ್ಪಾ ಅಂದ್ರೆ, ಯುಗಾದಿ ಹಬ್ಬದ ಶುಭ ಸಂದರ್ಭದಂದು 'ಪೈಲ್ವಾನ್' ಚಿತ್ರ ತೆರೆಕಾಣುವ ಸಾಧ್ಯತೆ ಇದೆ.<br /><br />Kannada Actor Kiccha Sudeep starrer 'Pailwaan' to release in April 2019.